ಸಾಫ್ಟ್ ವೇರ್ ಗಂಡ 2014 ರ ಭಾರತೀಯ ಕನ್ನಡ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು, ವೆಂಕಟೇಶ್ ನಿರ್ದೇಶಿಸಿದ್ದಾರೆ ಮತ್ತು ಸಹ-ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಜಗ್ಗೇಶ್ ಮತ್ತು ನಿಕಿತಾ ತುಕ್ರಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಸಾಕ್ಷಿ ಅಗರ್ವಾಲ್ ಮತ್ತು ಶ್ರೀನಾಥ್ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ಸಂಗೀತವನ್ನು ವೀರ್ ಸಮರ್ಥ್ ಅವರು ಸಂಯೋಜಿಸಿದ್ದಾರೆ , ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ. ಚಿತ್ರವು 5 ಡಿಸೆಂಬರ್ 2014 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಯಿತು. ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಪ್ರಮುಖ ದೂರದರ್ಶನ ಚಾನೆಲ್‌ ಒಂದಕ್ಕೆ ₹ 16 ಕೋಟಿಗೆ ಮಾರಾಟ ಮಾಡಲಾಗಿದೆ. ಈ ಚಿತ್ರವು 2012 ರ ಮಲಯಾಳಂ ಚಲನಚಿತ್ರ ಮೈ ಬಾಸ್ ನ ರಿಮೇಕ್ ಆಗಿದೆ, ಇದು ಸ್ವತಃ 2009 ರ ಚಲನಚಿತ್ರ ದಿ ಪ್ರಪೋಸಲ್ ಅನ್ನು ಆಧರಿಸಿದೆ. == ಕಥಾವಸ್ತು == ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಮನು, ತನ್ನ ಸಿಟ್ಟಿನ ಸ್ವಭಾವದ ಎನ್‌ಆರ್‌ಐ ಬಾಸ್‌ಳ ಅಡಿಯಲ್ಲಿ ಕೆಲಸ ಮಾಡಲು ಕಷ್ಟಪಡುತ್ತಾನೆ. ವೀಸಾ ಸಮಸ್ಯೆಗಳಿಂದ ಪ್ರಿಯಾ ಭಾರತವನ್ನು ತೊರೆಬೇಕಾಗಿ ಬಂದು ತನ್ನ ಸ್ವಾರ್ಥಕ್ಕಾಗಿ ಮನುವನ್ನು ಮದುವೆಯಾಗಲು ನಿರ್ಧರಿಸುತ್ತಾಳೆ. == ಪಾತ್ರವರ್ಗ == ಮನು ಪಾತ್ರದಲ್ಲಿ ಜಗ್ಗೇಶ್ ಪ್ರಿಯಾ ಎಸ್ ರಾವ್ ಪಾತ್ರದಲ್ಲಿ ನಿಕಿತಾ ತುಕ್ರಾಲ್ ಶ್ರೀನಾಥ್ ನ್ಯಾನ್ಸಿ ಪಾತ್ರದಲ್ಲಿ ಸಾಕ್ಷಿ ಅಗರ್ವಾಲ್ == ಸಂಗೀತ == ಚಿತ್ರದ ಸಂಗೀತವನ್ನು ವೀರ್ ಸಮರ್ಥ್ ಸಂಯೋಜಿಸಿದ್ದಾರೆ ಮತ್ತು ಆಡಿಯೊವನ್ನು ಆನಂದ್ ಆಡಿಯೊ ಲೇಬಲ್ ಮೂಲಕ ಹೊರತಂದಿದ್ದಾರೆ. ಸಾಹಿತ್ಯವನ್ನು ಡಾ.ನಾಗೇಂದ್ರ ಪ್ರಸಾದ್ ಮತ್ತು ಹೃದಯ ಶಿವ ಬರೆದಿದ್ದಾರೆ. ಅಟ್ಲಾಂಟಾ ಮೂಲದ ಗಾಯಕಿ ರೇಖಾ ಪಲ್ಲತ್ ಈ ಚಿತ್ರದ ಮೂಲಕ ಹಿನ್ನೆಲೆ ಗಾಯನಕ್ಕೆ ಪಾದಾರ್ಪಣೆ ಮಾಡಿದರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == 'ಸಾಫ್ಟ್‌ವೇರ್ ಗಂಡ' ಬಿಡುಗಡೆ ಸಮಾರಂಭದಲ್ಲಿ ಪುನೀತ್ ಮತ್ತು ಸುದೀಪ್ 2014-12-15 ವೇಬ್ಯಾಕ್ ಮೆಷಿನ್ ನಲ್ಲಿ. ಸಾಫ್ಟ್ ವೇರ್ ಗಂಧದ ಕೈ ತೊಳೆದ ಜಗ್ಗೇಶ್ 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. ಬೆಂಗಳೂರಿನಲ್ಲಿ ನಡೆದ ಸಾಫ್ಟ್‌ವೇರ್ ಗಂಡನ ಆಡಿಯೋ ಬಿಡುಗಡೆಗೆ ಜಗ್ಗೇಶ್ ಮತ್ತು ನಿಕಿತಾ ತುಕ್ರಾಲ್ ಅಟ್ಲಾಂಟಾ ಗಾಯಕಿ ರೇಖಾ ಪಲ್ಲತ್ ಅವರು 'ಸಾಫ್ಟ್‌ವೇರ್ ಗಂಡ' ಚಿತ್ರದ ಮೂಲಕ ಹಿನ್ನಲೆಗೆ ಪಾದಾರ್ಪಣೆ ಮಾಡಿದ್ದಾರೆ.